ಅಜ್ಜನಮನೆಯೆನ್ನುವ ಜೀವನಪಾಠ….. ಅಜ್ಜ ನೆನಪಿಗೆ ಬಂದಾಗಲೆಲ್ಲ ಅಜ್ಜನಮನೆ ಎನ್ನುವ ಮಮತೆಯ ಮಲ್ಹಾರವೊಂದು ಮನಸ್ಸನ್ನೆಲ್ಲ ತುಂಬಿಕೊಳ್ಳುತ್ತದೆ. ಈ ಪ್ರೀತಿ-ಮಮಕಾರಗಳ ಮೂಲವನ್ನೊಮ್ಮೆ ಕೆದಕಿ ನೋಡಿ! ಅಜ್ಜಿಯ ಸೆರಗಿನಂಚಿನ ಪ್ರೀತಿಯ ಸೆಲೆಯೊಂದು, ಅಜ್ಜನ ಕಿರುಬೆರಳಿನ ಅಭಯವೊಂದು ನಾವಿಡುವ ಪ್ರತೀ ಹೆಜ್ಜೆಯನ್ನೂ ಸಲಹುತ್ತಿರುತ್ತದೆ. ಎಷ್ಟೇ ಆಧುನಿಕ ಜೀವನಶೈಲಿಯಾದರೂ, ಅಪಾರವಾದ ಸ್ನೇಹಬಳಗವಿದ್ದರೂ ಅಜ್ಜ-ಅಜ್ಜಿ ಎನ್ನುವ ಪ್ರೀತಿಯ ಬಲೆಯೊಂದರಲ್ಲಿ ಬದುಕಿನುದ್ದಕ್ಕೂ ಬಂದಿಯಾಗಿರುತ್ತೇವೆ; ಅಚ್ಚರಿಯೆಂದರೆ ಆ ಬಂಧನ ನಮಗೆಂದೂ ಹೊರೆಯೆನ್ನಿಸುವುದಿಲ್ಲ. ಅಜ್ಜನ ಕಥೆಯಲ್ಲಿ ಬರುವ ನೂರಾರು ಮೂಟೆಗಳ ಭತ್ತದ ದಾಸ್ತಾನನ್ನು ರಾತ್ರೋರಾತ್ರಿ ಖಾಲಿ ಮಾಡಿದ ಇರುವೆಗಳ ದಂಡು, … Continue reading